ಕನ್ನಡ ನಾಡು | Kannada Naadu

ವಿಶಿಷ್ಟ ಚೇತನ ಕ್ರೀಡಾಪಟುಗಳಿಗೆ ವಿವಿಧ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿರುವ ಸರ್ಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿರುವ ತರಬೇತುದಾರ –  ರಾಹುಲ್ ಬಾಲಕಷ್ಣ

21 Jan, 2025

 

ಬೆಂಗಳೂರು:  ವಿಶಿಷ್ಟ ಚೇತನ ಕ್ರೀಡಾಪಟುಗಳಿಗೆ ವಿವಿಧ ರೀತಿಯಲ್ಲಿ ಪ್ರೋತ್ಸಾಹ ಮತ್ತು ಸಹಕಾರವನ್ನು ನೀಡಿ ಬೆಂಬಲಿಸುತ್ತಿರುವ ಕರ್ನಾಟಕ ಸರ್ಕಾರಕ್ಕೆ ಹಾಗೂ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ರೈಲ್ವೇ ಇಲಾಖೆಯಲ್ಲಿ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿರುವ ರಾಹುಲ್ ಬಾಲಕೃಷ್ಣ ಅವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಶ್ರೀಯುತರು 2016ರಿಂದ ವಿಶೇಷ ಚೇತನ ಕ್ರೀಡಾಪಟುಗಳಿಗೆ 1500 ಮೀಟರ್‍ನ ಮಧ್ಯಮ ದೂರದ ಓಟದಲ್ಲಿ ತರಬೇತಿ ನೀಡುತ್ತಿದ್ದಾರೆ ತರಬೇತಿ ನೀಡಿದ ವಿಶೇಷ ಚೇತನ ಅಂಧ ಕ್ರೀಡಾಪಟು ಕು. ರಕ್ಷಿತಾ ರಾಜು ಇವರು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024ರಲ್ಲಿ ಭಾಗವಹಿಸಿದ ಕರ್ನಾಟಕದ ಮೊದಲ ಅಂಧ ಕ್ರೀಡಾಪಟುವಾಗಿರುತ್ತಾರೆ. ಅಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಗಣನೀಯ ಸಾಧನೆ ದಾಖಲಿಸಿರುವ ಪ್ಯಾರಾ ಏಷ್ಯನ್ ಗೇಮ್ಸ್ ಪದಕ ವಿಜೇತೆ ಕು. ರಾಧಾ ವಿ. ಶ್ರೀ ಶರತ್ ಎಂ.ಎಸ್. ಇವರಿಗೂ ಸಹ ಇವರು ತರಬೇತಿಯನ್ನು ನೀಡುತ್ತಿದ್ದಾರೆ.

ಕರ್ನಾಟಕ ಸರ್ಕಾರವು ವಿಶಿಷ್ಟ ಚೇತರಿಗೆ ನಗದು ಪುರಸ್ಕಾರ ನೀಡುವುದರೊಂದಿಗೆ  ಉದ್ಯೋಗವಕಾಶಗಳಲ್ಲಿ ಸಮಾನವಾಗಿ ಪರಿಗಣಿಸುತ್ತಿರುವುದು ಅಭಿನಂದನೀಯ. ಪ್ರತಿಯೊಂದು ಕ್ರೀಡಾ ಸಾಧನೆಗೆ ನಗದು ಪುರಸ್ಕಾರ ನಿಗದಿಪಡಿಸಿರುವುದು ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ 2% ರಷ್ಟು ಉದ್ಯೋಗ ಮೀಸಲಾಗತಿ ನೀಡುತ್ತಿರುವುದು  ಮತ್ತು ಕಾಮನ್ ವೆಲ್ತ್ ಗೇಮ್ಸ್‍ಗಳಲ್ಲಿ ಪದಕ ವಿಜೇತರಿಗೆ ಗುಂಪು ಎ ಮತ್ತು ಬಿ ವೃಂದದ ಹುದ್ದೆ ನೀಡುತ್ತಿರುವುದು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶ ವಿಶಿಷ್ಟ ಚೇತನ ಕ್ರೀಡಾಪಟುಗಳು ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಲು ಉತ್ತೇಜನ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದ ವಿಶಿಷ್ಟ ಚೇತನ ಕ್ರೀಡಾಪಟುಗಳಿಂದ ವಿಶ್ವ ಮಟ್ಟದ ಸಾಧನೆಯನ್ನು ಖಂಡಿತವಾಗಿಯೂ ನಿರೀಕ್ಷೆ ಮಾಡಬಹುದು ಎಂದು ವಿಶ್ವಾಸವನ್ನು ವ್ಯಕ್ತಪಡಿಸಿರುವುದಾಗಿ ಯವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

Publisher: ಕನ್ನಡ ನಾಡು | Kannada Naadu

Login to Give your comment
Powered by